8139933111 [email protected]
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಅಕ್ರಮ : ಇ.ಡಿ .ವರದಿ ಸಲ್ಲಿಕೆ :
Wed, 04 Dec 2024
642 Views

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಅಕ್ರಮ : ಇ.ಡಿ .ವರದಿ ಸಲ್ಲಿಕೆ :

ಬೆಂಗಳೂರು : ಸಿ .ಎಂ .ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ .ಬಿ .ಎಂ.ಪಾರ್ವತಿರವರಿಗೆ (MUDA) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದರಲ್ಲಿ ಅಕ್ರಮಗಳು ನಡೆದಿವೆ , ಹಾಗೂ ಸಾವಿರಕ್ಕೂ ಹೆಚ್ಚು ಸೈಟ್ ಗಳನ್ನು MUDA  ಕಾನೂನು ಭಾಹಿರವಾಗಿ ಹಂಚಿಕೆ ಮಾಡಿದೆ , ಎಂದು (ಇ.ಡಿ) ಜಾರಿ ನಿರ್ದೇಶನಾಲಯದ ವರದಿ ಹೇಳಿದೆ.
MUDA ಅಕ್ರಮಕ್ಕೆ ಸಂಬಂದಿಸಿದ ತನಿಖೆ ಲೋಕಾಯುಕ್ತದಿಂದಲೂ ನಡೆಯುತ್ತಿದೆ , ಇ .ಡಿ ತನ್ನ ತನಿಖೆಯ ಮಾಹಿತಿಗಳನ್ನೊಳಗೊಂಡ ವರದಿಯನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಗೆ ಕೆಲ ದಿನಗಳ ಹಿಂದೆ ನೀಡಿರುವ ವಿಷಯ ಖಚಿತವಾಗಿದೆ.
ಸುದ್ದಿ ಸಂಸ್ಥೆಗಳಿಗೆ ಸೋರಿಕೆಯಾದ ಕೆಲ ಬಾಗಗಳಲ್ಲಿ , ಯಾವ ಯಾವ ಹಂತಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ :
ಕೆಸರೆ ಗ್ರಾಮದ 3.16 ಜಮೀನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವ ಸಂಬಂಧ ಅಕ್ರಮಗಳು ನಡೆದಿವೆ , ಕೆಲ ದಾಖಲೆಗಳಲ್ಲಿ , ಸ್ಥಳ ಭೇಟಿ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಲೋಪಗಳಾಗಿದ್ದು , ಈ ಅವಧಿಯಲ್ಲಿ ಸಿದ್ದರಾಮಯ್ಯ ನವರು ಉಪ ಮುಖ್ಯಮಂತ್ರಿ ಗಳಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂಬುದನ್ನು ಉಲ್ಲೇಖಿಸಲಾಗಿದೆ .
ನಕಲಿ ಸಹಿಗಳು, ಸಾಕ್ಷ ನಾಶ , ನಿಯಮಗಳ ಉಲ್ಲಂಘನೆ , ಕರ್ತವ್ಯ ಲೋಪ , ದಾಖಲೆಗಳನ್ನು ತಿದ್ದುವಿಕೆಯಂತಹ ಅಕ್ರಮಗಳು ನಡೆದಿವೆ ಎಂದು ವಿವರಿಸಲಾಗಿದೆ .
ಈ ಜಮೀನಿನ ಮಾರಾಟ ಮತ್ತು ಖರೀದಿಯಲ್ಲಿ ಸಿದ್ದರಾಮಯ್ಯ ನವರ ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಇತರರಿಂದ ನಿಯಮಗಳ ಉಲ್ಲಂಘನೆಯಾಗಿದೆ .ಹಾಗೂ ಭೂ ಪರಿವರ್ತನೆ ಸಂಬಂಧ ಗ್ರಾಮ ಲೆಕ್ಕಾಧಿಕಾರಿ ,ಕಂದಾಯ ನಿರೀಕ್ಷಕ , ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಂದ ಲೋಪಗಳಾಗಿರುವುದನ್ನು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ .

ಸ್ಥಳ ಪರಿಶೀಲನೆ ಸರಿಯಾಗಿ ನಡೆದಿಲ್ಲ, ವಿವಾದಿತ ಸ್ಥಳದಲ್ಲಿ ಕಟ್ಟಡಗಳು ಇದ್ದರೂ , ಅದರ ಬಗ್ಗೆ ಮಾಹಿತಿ ನೀಡದೆ ವರದಿ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆದ ಸಂದರ್ಭದಲ್ಲಿ ಕಟ್ಟಡಗಳು ಇದ್ದವು ಎಂಬುದು ಉಪಗ್ರಹ ನಕ್ಷೆಗಳಿಂದ ತಿಳಿಯುತ್ತದೆ , ಆದರೆ ಅಧಿಕಾರಿಗಳು ಇದನ್ನು ವರದಿಯಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಉಲ್ಲೇಖವಾಗಿದೆ .
ಸಿದ್ದರಾಮಯ್ಯ ನವರ ಪಿ.ಎ. ಎಸ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ .ಟಿ.ಕುಮಾರ್ ಮುಡಾ ಕಚೇರಿಯಲ್ಲಿ ಪ್ರಬಾವಿಯಾಗಿದ್ದು , ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಸಮಯದಲ್ಲಿ ಈ ಪ್ರಭಾವವನ್ನು ಬಳಸಿ , ಹಲವರ ಸಹಿಯನ್ನು ಪೋರ್ಜರಿ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ .
14 ಜೂನ್ 2014 ರಂದು ಶ್ರೀಮತಿ.ಪಾರ್ವತಿಯವರು ಪರಿಹಾರಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿದ್ದಲಾಗಿದೆ. ಅರ್ಜಿಯಲ್ಲಿ ಕೆಲವು ಪದಗಳಿಗೆ ವೈಟನರ್ ಹಚ್ಚಿದ್ದು, ಆ ಬದಲಾವಣೆಗಳನ್ನು ದೃಡೀಕರಿಸಿಲ್ಲ. ಅವರ ಅರ್ಜಿಗಳನ್ನು ನಿವೇಶನ ಹಂಚಿಕೆ ವಿಭಾಗಕ್ಕೆ ಕಳುಹಿಸಿಲ್ಲ , ಬದಲಾಗಿ ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಸ್ವತಃ ತಾವೇ ನಿರ್ವಹಣೆ ಮಾಡಿದ್ದಾರೆ, ಅವರು ಹಗರಣದಲ್ಲಿ ಶಾಮೀಲಾಗಿರುವುದನ್ನು ಇದು ಸೂಚಿಸುತ್ತದೆ ಎಂದು ವಿವರಿಸಿದೆ.
ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಆದ ಸಂದರ್ಭದಲ್ಲಿ ಸಿದ್ದರಾಮಯ್ಯ ನವರ ಮಗ ಯತೀಂದ್ರ ಸಿದ್ದರಾಮಯ್ಯ ಶಾಸಕರು ಹಾಗೂ ಮುಡಾ ಸದಸ್ಯರಾಗಿದ್ದರು ಮತ್ತು ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು ಎಂಬ ವಿಷಯವನ್ನು ತನ್ನ ವರದಿಯಲ್ಲಿ ಇ.ಡಿ. ಅನುಮಾನ ವ್ಯಕ್ತ ಮಾಡಿದೆ.